ಅರಬ್ ದೇಶಗಳ ಯಾವುದೇ ರೀತಿಯ ಪ್ರಜಾ ಪ್ರಭುತ್ವ ಇಸ್ರೇಲಿಗೆ ಹಾನಿಕಾರಿ: ಇಸ್ರೇಲಿನ ಮಾಜಿ ಸಂಸದ


ಟೆಲ್ ಅವೀವ್, ಡಿ.6: ಮಧ್ಯಪ್ರಾಚ್ಯ ದೇಶದಲ್ಲಿ ಅಮೆರಿಕದ ಬೇಹುಗಾರರು ಮತ್ತು ನಿರಂಕುಶ ಆಡಳಿತಗಾರರು ಬಾಳಿಕೆ ಬರುತ್ತಾರೆ. ಯಾಕೆಂದರೆ ಅರಬ್ ದೇಶಗಳಲ್ಲಿ ಜನತಾ ಸರಕಾರ ಬಂದರೆ ಅಮೆರಿಕಕ್ಕೆ ತಲೆ ನೋವಿನ ವಿಚಾರವಾಗಿ ಪರಿಣಮಿಸುತ್ತದೆ.
ಆದರೆ ಈ ಪ್ರಜಾಪ್ರಭುತ್ವವಾದಿ ಸರಕಾರಗಳು ಕೇವಲ ಅಮೆರಿಕಕ್ಕೆ ಮಾತ್ರವಲ್ಲ ಯಹೂದಿ ದೇಶಗಳಿಗೂ ದೊಡ್ಡ ಸಮಸ್ಯೆಯಾಗಲಿದೆ ಎಂದು ಇಸ್ರೇಲಿನ ಮಾಜಿ ಸಂಸದ ಯೂಸಿ ಬಿಲಿಯನ್ ಹೇಳಿದ್ದಾರೆ. ಅರಬರಲ್ಲಿ ಯಾವುದೇ ರೀತಿಯ ಪ್ರಜಾಪ್ರಭುತ್ವದ ಸರಕಾರ ಬಂದರೆ ಇಸ್ರೇಲಿಗೆ ಅಪಾಯವಿದೆ. ಇದರಿಂದ ಆ ರಾಷ್ಟ್ರಗಳಲ್ಲಿ ಇಸ್ರೇಲಿ ವಿರೋಧಿ ಯೋಚನೆಗಳಿಗೆ ಬಲ ಸಿಗಲಿದೆ ಎಂದು ಯೂಸಿ ಬಿಲಿಯನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅರಬರ ಸರ್ವಾಧಿಕಾರಿ ಆಡಳಿತಗಾರರನ್ನೆ ಬಯಸುತ್ತೇವೆ. ಅರಬ್‍ನ ಹೆಚ್ಚಿನ ನಾಯಕರು ಪ್ರಾದೇಶಿಕ ವಿಷಯಗಳಲ್ಲಿ ಇರಾನ್‍ನ ಹಸ್ತಕ್ಷೇಪದಿಂದ ತೊಂದರೆಗೊಳಗಾಗಿರುತ್ತಾರೆ. ಆದ್ದರಿಂದ ಅವರ ದೃಷ್ಟಿ ಫೆಲಸ್ತೀನಿ ಸಮಸ್ಯೆಗಳತ್ತ ಹರಿದಿಲ್ಲ.
ಅರಬ್ ದೇಶಗಳ ಫೆಲಸ್ತೀನಿ ಸಮಸ್ಯೆಯ ಕುರಿತು ಜಮೆ ಮತ್ತು ವೆಚ್ಚದಿಂದ ಆಚೆಗೆ ನಾಲಗೆ ಹೊರಳದು. ಅವರು ಫೆಲಸ್ತೀನನ್ನು ಬೆಂಬಲಿಸುತ್ತಾರೆ. ಇಸ್ರೇಲ್ ವಿರುದ್ಧ ಯಾವುದೇ ಹೆಜ್ಜೆಯನ್ನು ಅವರು ಇಡುವುದಿಲ್ಲ. ಎಂದು ಅವರು ಹೇಳಿದರು.
ಫೆಲಸ್ತೀನಿ ವಿವಾದ ನೆರೆಯ ಅರಬ್ ದೇಶಗಳ ಜೊತೆಗೆ ನಮಗೆ ದೊಡ್ಡ ಸಮಸ್ಯೆಯಾಗಿಲ್ಲ ಎಂಧು ಯೂಸಿ ಬಿಲಿಯನ್ ತಿಳಿಸಿದರು. ವಿವಾದ ಪರಿಹಾರವಾದರೆ ನೆರೆಯ ದೇಶಗಳಲ್ಲಿ ನಮ್ಮ ಸಂಬಂಧ ಹೆಚ್ಚಿನ ಸುಧಾರಣೆಯಾಗದು. ಫೆಲಸ್ತೀನಿ ಅಥಾರಿಟಿ ಹಲವು ದಶಕಗಳಿಂದ ಇಸ್ರೇಲ್ ಜೊತೆ ರಾಜಕೀಯ ಪರಿಹಾರವನ್ನು ಬಯಸುತ್ತಿದೆ. ಆದರೆ ಯಹೂದಿ ದೇಶ ಈ ವಿವಾದ ಚಾಲ್ತಿಯಲ್ಲಿರುವಾಗಲೆ ಗುಟ್ಟಾಗಿ ಇತರ ಅರಬ್ ದೇಶಗಳೊಂದಿಗೆ ಸಂಬಂಧವನ್ನು ಇರಿಸಿಕೊಂಡಿದೆ. ಹೀಗಿರುವಾಗ ಫೆಲಸ್ತೀನಿ ಜನರಿಗೆ ಬೇರೆಯದೇ ಒಂದು ರಾಷ್ಟ್ರವನ್ನು ನೀಡುವ ಅಗತ್ಯವಿಲ್ಲ ಎಂದು ಇಸ್ರೇಲ್ ನಿರ್ಧರಿಸಿದೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *