ಅಯೋಧ್ಯೆ; ವಿಚಾರಣೆಯನ್ನು ಮುಂದೂಡಬೇಕೆನ್ನುವ ಕಪಿಲ್ ಸಿಬಲ್ ವಾದದಲ್ಲಿ ತನಗೆ ಸಹಮತವಿಲ್ಲ: ಸುನ್ನಿ ವಕ್ಫ್ ಬೋರ್ಡ್


ಹೊಸದಿಲ್ಲಿ, ಡಿ.7: ಅಯೋಧ್ಯೆ ವಿಷಯದಲ್ಲಿ ಕಪಿಲ್ ಸಿಬಲ್‍ರ ವಾದದೊಂದಿಗೆ ತನಗೆ ಸಹಮತವಿಲ್ಲ. ಕಪಿಲ್ ನಮ್ಮ ವಕೀಲರೇ ಆದರೂ ಕಳೆದ ದಿವಸ ಅವರು ಕೋರ್ಟಿನಲ್ಲಿ ಹೇಳಿದ್ದು ಸರಿಯಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡು ಸದಸ್ಯ ಹಾಜಿ ಮೆಹಬೂಬ್‍ರು ಹೇಳಿದ್ದಾರೆ.
ಪ್ರಕರಣವನ್ನು 2019 ರ ವರೆಗೆ ಮುಂದೂಡಬೇಕೆಂದು ಕಪಿಲ್ ಸಿಬಲ್ ಸುಪ್ರೀಮ್ ಕೋರ್ಟಿನಲ್ಲಿ ಆಗ್ರಹಿಸಿದ್ದರು. ಅವರು ಒಂದು ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿ ಕೂಡಾ ಆಗಿದ್ದಾರೆ. ಪ್ರಕರಣದಲ್ಲಿ ಅತ್ಯಂತ ಬೇಗ ತೀರ್ಪು ಹೊರ ಬರಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಮೆಹಬೂಬ್ ಹೇಳಿದರು.
ಕಪಿಲ್ ಸಿಬಲ್‍ರ ವಾದವನ್ನು ಹಿರಿಯ ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ಅಯೋಧ್ಯೆ ವಿಷಯದಲ್ಲಿ ರಾಹುಲ್, ಸೋನಿಯಾ ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸುಬ್ರಮಣಿಯನ್ ಸ್ವಾಮಿ ಈ ವಿಷಯದಲ್ಲಿ ಕಾಂಗ್ರೆಸನ್ನು ಟೀಕಿಸಿದ್ದರು. ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Check Also

ರಾಜಸ್ಥಾನದಲ್ಲಿ ಉದ್ದೇಶ ಪೂರ್ವಕವಾಗಿ ಅಲ್ಪಸಂಖ್ಯಾತರ ಸ್ಕಾಲರ್‍ಶಿಪ್ ಸ್ಥಗಿತಗೊಳಿಸಲಾಗುತ್ತಿದೆ

ಜೈಪುರ, ಡಿ.18: ಅಲ್ಪಸಂಖ್ಯಾತರಿಗಾಗಿ ಆರಂಭಿಸಲಾದ ಸ್ಕಾಲರ್ ಶಿಪ್‍ನ್ನು ಉದ್ದೇಶ ಪೂರ್ವಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಸಂಘಟನೆಗಳು ಆರೋಪಿಸಿವೆ. ಅವುಗಳು ಹೇಳುವ …

Leave a Reply

Your email address will not be published. Required fields are marked *